ಕೊನೆಗೂ ಅಧಿಕೃತವಾಗಿ ಗುಡ್ ನ್ಯೂಸ್ ಕೊಟ್ರು ನಟಿ ಹರಿಪ್ರಿಯಾ!

ಬುಧವಾರ, 22 ಮಾರ್ಚ್ 2023 (08:40 IST)
Photo Courtesy: Twitter
ಬೆಂಗಳೂರು: ನಟಿ ಹರಿಪ್ರಿಯಾ ಇತ್ತೀಚೆಗಿನ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಅವರು ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಲು ಕಾರಣವಾಗಿತ್ತು.

ಸದ್ಯದಲ್ಲೇ ಬರಲಿದೆ, ಹೊಸ ಸುದ್ದಿ ಹೇಳಲು ಕಾಯುತ್ತಿದ್ದೇನೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದು ನೋಡಿ, ಸಿಂಹಪ್ರಿಯಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರಬಹುದು ಎಂದು ನೆಟ್ಟಿಗರು ಗೆಸ್ ಮಾಡಿದ್ದರು.

ಆದರೆ ಇದೀಗ ಸ್ವತಃ ಹರಿಪ್ರಿಯಾ ಆ ಗುಡ್ ನ್ಯೂಸ್ ಏನೆಂದು ಖಚಿತಪಡಿಸಿದ್ದಾರೆ. ನೆಟ್ಟಿಗರು ಅಂದುಕೊಂಡಂತೇ ಹರಿಪ್ರಿಯಾ ಮಗುವಿನ ಸುದ್ದಿ ನೀಡಿಲ್ಲ. ಬದಲಾಗಿ ತಾವು ಹೊಸ ಯೂ ಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದು, ಅದೇ ವಿಚಾರವನ್ನು ಈ ರೀತಿಯಾಗಿ ಹೇಳಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು. ಕೊನೆಗೂ ಈಗ ಹರಿಪ್ರಿಯಾ ಅವರೇ ಗುಡ್ ನ್ಯೂಸ್ ಏನೆಂದು ಖಚಿತಪಡಿಸಿದ್ದರಿಂದ ಅಭಿಮಾನಿಗಳ ಅನುಮಾನವೂ ಪರಿಹಾರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ