ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರ ಇಲ್ಲವೇ?

ಮಂಗಳವಾರ, 29 ಡಿಸೆಂಬರ್ 2020 (12:44 IST)
ಹೈದರಾಬಾದ್ : ಓಂರಾತ್ ನಿರ್ದೇಶನದ ಪ್ರಭಾಸ್ ಅಭಿನಯದ ‘ಆದಿಪುರುಷ’ ಚಿತ್ರದ ಬಗ್ಗೆ ಚಿತ್ರರಂಗಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದರಲ್ಲಿ ಸೀತಾ ಪಾತ್ರ ಇದೆಯೇ? ಇಲ್ಲವೇ? ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.

ನೂರಾರು ಕೋಟಿ ಬಜೆಟ್ ನ ಆದಿಪುರುಷ ಚಿತ್ರ ಪೌರಾಣಿಕ ಕಥೆ ರಾಮಾಯಣವನ್ನು ಆಧರಿಸಿದ್ದು, ಇದರಲ್ಲಿ ಬರುವ ಎಲ್ಲಾ ಪಾತ್ರವರ್ಗಗಳನ್ನು ಪರಿಚಯಿಸಲಾಗಿತ್ತು. ಈ ಚಿತ್ರದಲ್ಲಿ ಮುಖ್ಯ ಪಾತ್ರವಾದ ರಾಮನ ಪಾತ್ರದಲ್ಲಿ  ನಟ ಪ್ರಭಾಸ್ ಹಾಗೂ ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸುತ್ತಿರುವುದು ಈಗಾಗಲೇ ತಿಳಿದಿದೆ.

ಆದರೆ ಬಹಳ ಮುಖ್ಯ ಪಾತ್ರವಾದ ಸೀತೆಯ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿಯವರೆಗೂ ಬಹಿರಂಗವಾಗಿಲ್ಲ. ಹಾಗಾಗಿ ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರ ಇದೆಯೇ? ಅಥವಾ ಇಲ್ಲವೇ ಎಂಬ ಅನುಮಾನ ಶುರುವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ