ಚಿರಂಜೀವಿ ಇಂತಹ ಚಿತ್ರಗಳಲ್ಲಿ ನಟಿಸುತ್ತಾರೆ ಎಂದು ಬೇಸರಗೊಂಡ ಅಮ್ಮ ರಾಜಶೇಖರ್

ಸೋಮವಾರ, 28 ಡಿಸೆಂಬರ್ 2020 (12:20 IST)
ಹೈದರಾಬಾದ್ : ನೃತ್ಯ ನಿರ್ದೇಶಕರಾಗಿ ಮತ್ತು ನಿರ್ದೇಶಕರಾಗಿ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತರಾದ ಅಮ್ಮ ರಾಜಶೇಖರ್ ಅವರು ಇದೀಗ ಖ್ಯಾತ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಜಶೇಖರ್ ಅವರು ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ, ಚಿರಂಜೀವಿಯಂತಹ ಸ್ಟಾರ್ ನಟರು ಸತತವಾಗಿ ರಿಮೇಕ್ ಸಿನಿಮಾ ಮಾಡುವುದು ಸರಿಯಲ್ಲ. ಮೂಲ ಕಥೆಗಳಲ್ಲಿ ಅಭಿನಯಿಸುವುದು ಉತ್ತಮ. ಸತತವಾಗಿ ರಿಮೇಕ್ ಚಿತ್ರದಲ್ಲಿ ನಟಿಸುತ್ತಿರುವ ಚಿರಂಜೀವಿ ಅವರು ತಪ್ಪು ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ಚಿರಂಜೀವಿ ಅವರು ಯಶಸ್ವಿ ಕಥೆಯೊಂದಿಗೆ ಅಪಾಯ ಕಡಿಮೆ ಎಂದು ಭಾವಿಸುತ್ತಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ