ಗಾರ್ಗಿಗಾಗಿ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ ಸಾಯಿ ಪಲ್ಲವಿ

ಮಂಗಳವಾರ, 10 ಮೇ 2022 (10:22 IST)
ಹೈದರಾಬಾದ್: ಸಹಜ ಸುಂದರಿ ಸಾಯಿ ಪಲ್ಲವಿ ಗಾರ್ಗಿ ಸಿನಿಮಾ ಮೂಲಕ ಕನ್ನಡಕ್ಕೂ ಎಂಟ್ರಿಕೊಡುತ್ತಿದ್ದಾರೆ.

ಮೊನ್ನೆಯಷ್ಟೇ ಸಾಯಿ ಪಲ್ಲವಿ ಜನ್ಮದಿನ ನಿಮಿತ್ತ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಸಾಯಿ ಪಲ್ಲವಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ವಿಡಿಯೋ ಪ್ರಕಟಿಸಿದ್ದಾರೆ.

ಗಾರ್ಗಿ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿದ್ದು, ಮೂರೂ ಭಾಷೆಗಳಲ್ಲಿ ಸಾಯಿ ಪಲ್ಲವಿ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ