ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ಸಂಜನಾ ಗಲ್ರಾನಿ ಮತ್ತೆ ಸೋಷಿಯಲ್ ಮೀಡಿಯಾಗೆ ಮರಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲವು ದಿನಗಳ ಕಾಲ ಸಾರ್ವಜನಿಕ ಜೀವನದಿಂದ ದೂರವಿದ್ದ ಸಂಜನಾ ಈಗ ಹೊಸ ವರ್ಷಕ್ಕೆ ಇನ್ ಸ್ಟಾಗ್ರಾಂಗೆ ಮರಳಿದ್ದಾರೆ. ಅಭಿಮಾನಿಯೊಬ್ಬರ ಪೋಸ್ಟ್ ಶೇರ್ ಮಾಡಿರುವ ಸಂಜನಾ ಸಹೋದರಿಗಿಂತ ಬೆಸ್ಟ್ ಫ್ರೆಂಡ್ ಮತ್ತೊಬ್ಬರಿಲ್ಲ ಎಂದು ಬರೆದುಕೊಂಡಿದ್ದಾರೆ.