ಕಿಚ್ಚ ಸುದೀಪ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

ಮಂಗಳವಾರ, 7 ಜನವರಿ 2020 (15:48 IST)
ಬೆಂಗಳೂರು: ದಬಾಂಗ್ 3 ಸಿನಿಮಾದಲ್ಲಿ ಜತೆಯಾಗಿ ಅಭಿನಯಿಸಿದ ಮೇಲೆ ಸಲ್ಮಾನ್ ಖಾನ್ ಜತೆಗಿನ ಕಿಚ್ಚ ಸುದೀಪ್ ಸ್ನೇಹ ಗಟ್ಟಿಯಾಗಿದೆ. ಈ ಸ್ನೇಹದ ಸಂಕೇತವಾಗಿ ಕಿಚ್ಚ ಸುದೀಪ್ ಮನೆ ಮುಂದೆ ಭರ್ಜರಿ ಗಿಫ್ಟ್ ಒಂದು ಬಂದು ನಿಂತಿದೆ.

 

ಸುದೀಪ್ ಗೆ ಸಲ್ಮಾನ್ ದುಬಾರಿ ಬೆಲೆ ಬಿಎಂಡಬ್ಲ್ಯು ಎಂ5 ಮಾದರಿಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರೀತಿಯಿಂದ ಕೊಟ್ಟ ಗಿಫ್ಟ್ ನ್ನು ಸ್ವತಃ ಸಲ್ಮಾನ್ ಸುದೀಪ್ ಗೆ ಹಸ್ತಾಂತರಿಸಿದ್ದಾರೆ.

ಸಲ್ಮಾನ್, ಸುದೀಪ್ ಹಾಗೂ ಸುದೀಪ್ ತಂದೆ ಕಾರಿನ ಜತೆಗೆ ತೆಗೆಸಿಕೊಂಡ ಖುಷಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕಿಚ್ಚ ಗಿಫ್ಟ್ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ