ನಾಗಚೈತನ್ಯ ಜೊತೆಗಿದ್ದ ಮನೆ ಭರ್ಜರಿ ಮೊತ್ತಕ್ಕೆ ಖರೀದಿಸಿದ ಸಮಂತಾ?!

ಸೋಮವಾರ, 1 ಆಗಸ್ಟ್ 2022 (09:10 IST)
ಹೈದರಾಬಾದ್: ನಾಗಚೈತನ್ಯರಿಂದ ಬೇರೆಯಾಗುತ್ತಿರುವ ಸುದ್ದಿ ಪ್ರಕಟಿಸಿದ ಬಳಿಕ ನಟಿ ಸಮಂತಾ ಋತು ಪ್ರಭು ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ.

ಸಮಂತಾ ಈಗ ಹೊಸ ಮನೆ ಖರೀದಿ ಮಾಡಿರುವ ವಿಚಾರ ಸುದ್ದಿಯಾಗಿದೆ. ನಾಗಚೈತನ್ಯ ಜೊತೆಗಿದ್ದಾಗ ವಾಸಿಸುತ್ತಿದ್ದ ಮನೆಯನ್ನು ಸಮಂತಾ ಈಗ ಭರ್ಜರಿ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಬರೋಬ್ಬರಿ 100 ಕೋಟಿ ರೂ. ಕೊಟ್ಟು ಆ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೋ, ರೂಮರ್ ಮಾತ್ರವೋ ಗೊತ್ತಿಲ್ಲ, ಆದರೆ ಸಮಂತಾರ ಈ ಸುದ್ದಿ ಕೇಳಿ ಫ್ಯಾನ್ಸ್ ಅಂತೂ ಥ್ರಿಲ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ