ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ಶೂಟಿಂಗ್ ಗೆ ವಾಪಸಾಗಲಿದ್ದಾರೆ ಪ್ರಭಾಸ್
ಇದೀಗ ಯುರೋಪ್ ಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಪ್ರಭಾಸ್ ಕೆಲವು ದಿನ ಶೂಟಿಂಗ್ ನಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಪ್ರಭಾಸ್ ಮರಳಿ ಶೂಟಿಂಗ್ ಗೆ ಹಾಜರಾಗುತ್ತಿದ್ದು, ಈ ವಾರದಿಂದ ಸಲಾರ್ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇದಕ್ಕೂ ಮೊದಲು ಮತ್ತೆ ಯುರೋಪ್ ಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಇದೀಗ ಫಿಟ್ ಆಗಿರುವ ಪ್ರಭಾಸ್ ಶೂಟಿಂಗ್ ಗೆ ಮರಳಲಿದ್ದಾರೆ.