ಸಾಮಾನ್ಯನಂತೆ ಸರದಿ ಸಾಲಿನಲ್ಲಿ ನಿಂತ ದಳಪತಿ ವಿಜಯ್ ಫೋಟೋ ವೈರಲ್

ಭಾನುವಾರ, 31 ಜುಲೈ 2022 (16:47 IST)
Photo Courtesy: Twitter
ಚೆನ್ನೈ: ದಳಪತಿ ವಿಜಯ್ ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಜಯ್ ಈಗ ವಾರಿಸು ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ಚಿತ್ರದ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ.

ಈ ಕಾರಣಕ್ಕೆ ಅವರು ವಿಶಾಖಪಟ್ಟಣಂಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಚೆಕಿಂಗ್ ಗಾಗಿ ಸಾಮಾನ್ಯರಂತೆ ಯಾವುದೇ ಸ್ಟಾರ್ ಎಂಬ ಹಮ್ಮು ಇಲ್ಲದೇ ನಿಂತಿರುವ ಫೋಟೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ