ಸಾಮಾನ್ಯವಾಗಿ ಯಾವುದೇ ಚಿತ್ರ ಆಗಿರಲಿ ಅಥವಾ ಕಲಾವಿದರು ಆಗಿರಲಿ ತನಗೆ ಏನು ಅನ್ನಿಸುತ್ತದೆಯೋ ಅದನ್ನು ನೇರ ಹಾಗೂ ದಿಟ್ಟವಾಗಿ ಹೇಳಿ ಬಿಡುವ ತಾಕತ್ ಹೊಂದಿರುವ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತ ಋತು ಇತ್ತೀಚಿನ ದಿನಗಳಲ್ಲಿ ಮೀಡಿಯಾದವರು ಎಂತಹ ವಿಮರ್ಶೆ ಮಾಡಿದರು ಸಹಿತ ಮಾತನಾಡದೆ ಮೌನವಾಗಿ ಇದ್ದಾಳೆ. ಇದಕ್ಕೆ ಸಂಬಂಧಪಟ್ಟಂತೆ ಆಕೆಯನ್ನು ಕೆದಕುವವರು ಕಡಿಮೆ ಇಲ್ಲ.
ಆದರೆ ಸಮ್ಮು ಇತ್ತೀಚಿಗೆ ಟ್ವಿಟ್ವರ್ ನಲ್ಲಿ ತನಗೆ ಮೂಗಿನ ಮೇಲೆ ಕೋಪ ಇರುವುದಾಗಿ ಹೇಳಿದ್ದಾಳೆ. ಹೇಗೆ ಅಂತೀರ.. ಈ ಮಧ್ಯೆ ಚಿತ್ರವೊಂದರ ಸನ್ನಿವೇಶವನ್ನು ಸುಮಾರು ಅರ್ಧ ಗಂಟೆಗಳ ಕಾಲ ಶೂಟ್ ಮಾಡಿದ ನಿರ್ದೇಶಕನ ಕಾಟ ತಾಳಲಾಗದೆ ರಾಸ್ಕಲ್, ಹಂದಿ ಎಂದು ಬೈದುಕೊಂಡಳಂತೆ ಮನದಲ್ಲಿ!! ಹಾಗಂತ ಟ್ವೀಟ್ ಮಾಡಿ ಹೇಳಿದ್ದಾಳೆ.