ಯೂ ಟ್ಯೂಬ್ ಚಾನೆಲ್ ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟಿ ಸಮಂತಾ

ಗುರುವಾರ, 21 ಅಕ್ಟೋಬರ್ 2021 (16:37 IST)
ಹೈದರಾಬಾದ್: ನಾಗಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಪ್ರಕಟಣೆ ನೀಡಿದ ಬಳಿಕ ತಮ್ಮ ಬಗ್ಗೆ ಕೆಲವು ಯೂ ಟ್ಯೂಬ್ ಚಾನೆಲ್ ಗಳು ಮಾನಹಾನಿಕರ ಸುದ್ದಿ ಪ್ರಸಾರ ಮಾಡಿರುವುದು ಸಮಂತಾ ಗಮನಕ್ಕೆ ಬಂದಿದೆ.


ಇದೀಗ ಅಂತಹ ಯೂ ಟ್ಯೂಬ್ ಚಾನೆಲ್ ಗಳ ವಿರುದ್ಧ ಸಮಂತಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಈಗಾಗಲೇ ತಮ್ಮ ವಕೀಲರ ಮೂಲಕ ಒಂದು ಯೂ ಟ್ಯೂಬ್ ಚಾನೆಲ್ ಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ತಮಗೆ ವಿವಾಹೇತರ ಸಂಬಂಧವಿತ್ತು, ಅಬಾರ್ಷನ್ ಮಾಡಿಸಿಕೊಂಡಿದ್ದಾಗಿ ಯೂ ಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ಹರಡಿದ್ದರ ವಿರುದ್ಧ ಸಮಂತಾ ಸಿಡಿದೆದ್ದಿದ್ದಾರೆ. ಅಂತಹ ಚಾನೆಲ್ ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ