ಮತ್ತೆ ಚಿಕಿತ್ಸೆಗಾಗಿ ಅಮೆರಿಕಾಗೆ ತೆರೆಳಲಿರುವ ಸಮಂತಾ?
ನಾಗಚೈತನ್ಯ ಜೊತೆಗೆ ವಿಚ್ಛೇದನದ ಬಳಿಕ ಸಮಂತಾ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಮಾಂಸಖಂಡಗಳಿಗೆ ಸಂಬಂಧಪಟ್ಟ ಅನಾರೋಗ್ಯಕ್ಕೊಳಗಾಗಿದ್ದ ನಟಿ ಅಮೆರಿಕಾಗೆ ತೆರಳಿ ಕೆಲವು ಸಮಯ ಚಿಕಿತ್ಸೆ ಪಡೆದು ವಾಪಸಾಗಿದ್ದರು.
ಇದಾದ ಬಳಿಕ ಶಾಕುಂತಲಾ ರಿಲೀಸ್ ಆಗಿತ್ತು. ಇದೀಗ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಮತ್ತೆ ಒಂದು ತಿಂಗಳ ಕಾಲ ಬ್ರೇಕ್ ಪಡೆದು ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದೆ.