ಮಾಜಿ ಗಂಡನ ಡೇಟಿಂಗ್ ಬಗ್ಗೆ ನಾನೇನೂ ಹೇಳಿಲ್ಲ: ಸಮಂತಾ ಋತು ಪ್ರಭು
ನಾಗಚೈತನ್ಯ ಮತ್ತು ಶೋಭಿತಾ ರೆಸ್ಟೋರೆಂಟ್ ಒಂದರಲ್ಲಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಮಂತಾ ಆ ಹುಡುಗಿಗಾದರೂ ನೆಮ್ಮದಿ ಸಿಗಲಿ ಎಂದಿದ್ದಾರೆ ಎಂದು ಸುದ್ದಿಯಾಗಿತ್ತು.
ಆದರೆ ತಮ್ಮ ಬಗ್ಗೆ ಇಂತಹದ್ದೊಂದು ಸುದ್ದಿ ಬಂದ ಬೆನ್ನಲ್ಲೇ ಟ್ವಿಟರ್ ಮೂಲಕ ಸಮಂತಾ ಸ್ಪಷ್ಟನೆ ನೀಡಿದ್ದು, ನಾನು ಇಂತಹ ಹೇಳಿಕೆ ನೀಡಿಯೇ ಇಲ್ಲ ಎಂದಿದ್ದಾರೆ.