ರಶ್ಮಿಕಾ ಬರ್ತ್ ಡೇಗೆ ಮೊದಲೇ ಅಭಿಮಾನಿಗಳಿಂದ ಸರ್ಪೈಸ್ ಉಡುಗೊರೆ

ಗುರುವಾರ, 30 ಮಾರ್ಚ್ 2023 (09:00 IST)
ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಕೆಲವು ದಿನಗಳ ಮೊದಲೇ ಅಭಿಮಾನಿಗಳು ಆಕೆಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ.

ಏಪ್ರಿಲ್ 5 ರಂದು ರಶ್ಮಿಕಾ 27 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಮೊದಲೇ ರಶ್ಮಿಕಾ ಅಭಿಮಾನಿಗಳು ಆಕೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಚ್ಚರಿ ನೀಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾರನ್ನು ಭೇಟಿಯಾದ ಕೆಲವು ಅಭಿಮಾನಿಗಳು ಕೇಕ್ ನೀಡಿ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಖುಷಿಗೊಂಡ ರಶ್ಮಿಕಾ ಧನ್ಯವಾದ ಸಲ್ಲಿಸಿದ್ದಲ್ಲದೆ, ಕೇಕ್ ಕತ್ತರಿಸಿ ತಾವೇ ತಿನಿಸಿ ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ