ಸಮಂತಾ ಇನ್ ಸ್ಟಾಗ್ರಾಂ ಪುಟದಲ್ಲಿ ಯುವ ರಾಜಕಾರಣಿಯ ಫೋಟೋ! ತಕ್ಷಣವೇ ಡಿಲೀಟ್
ಆದರೆ ಇದೀಗ ಸಮಂತಾರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಯ್ತು. ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಪುತ್ರ ಕೆಟಿ ರಾಮ ರಾವ್ ಫೋಟೋ ಪ್ರಕಟಿಸಿದ್ದು ನೋಡಿ ಅಭಿಮಾನಿಗಳು ಅರೆಗಳಿಗೆ ತಬ್ಬಿಬ್ಬಾಗಿದ್ದರು.
ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೇ ಫೋಟೋ ಡಿಲೀಟ್ ಮಾಡಲಾಗಿದ್ದು, ಸಮಂತಾ ಮ್ಯಾನೇಜರ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಇದು ತಾಂತ್ರಿಕ ದೋಷದಿಂದಾಗಿ ಪ್ರಕಟವಾದ ಫೋಟೋ. ಉದ್ದೇಶಪೂರ್ವಕವಾಗಿ ಈ ಫೋಟೋ ಪ್ರಕಟಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಲಾಯಿತು.