ಮತ್ತೆ ಒಂದಾಗಲಿದ್ದಾರೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ

ಬುಧವಾರ, 6 ಜುಲೈ 2022 (16:51 IST)
ಹೈದರಾಬಾದ್: ಟಾಲಿವುಡ್ ನ ಹಿಟ್ ಜೋಡಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೂರಿ ಜಗನ್ನಾಥ್ ನಿರ್ಮಾಣದಲ್ಲಿ ವಿಜಯ್ ದೇವರಕೊಂಡ ಜನಗಣಮನ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಶುರುವಾಗಿದೆ. ಚಿತ್ರದ ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸುವುದು ಖಚಿತವಾಗಿದೆ.

ಈ ನಡುವೆ ಚಿತ್ರದಲ್ಲಿ ವಿಶೇಷ ಹಾಡೊಂದನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಹಾಡಿನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರಂತೆ. ಈ ಸುದ್ದಿ ರಶ್ಮಿಕಾ-ವಿಜಯ್ ಅಭಿಮಾನಿಗಳಿಗೆ ಥ್ರಿಲ್ ಉಂಟು ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ