ಕಾಫಿ ವಿತ್ ಕರಣ್ ಶೋನಲ್ಲಿ ವಿಚ್ಛೇದನದ ಕಾರಣ ಬಹಿರಂಗಪಡಿಸಲಿದ್ದಾರಂತೆ ಸಮಂತಾ

ಬುಧವಾರ, 22 ಜೂನ್ 2022 (08:10 IST)
ಮುಂಬೈ: ಟಾಲಿವುಡ್ ನ ಮೋಸ್ಟ್ ಬೇಡಿಕೆಯ ನಟಿ ಸಮಂತಾ ಋತು ಪ್ರಭು ಕಳೆದ ವರ್ಷ ಪತಿ ನಾಗಚೈತನ್ಯರಿಂದ ದೂರವಾದ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಬೇಸರವುಂಟು ಮಾಡಿದ್ದರು.

ಸಮಂತಾ-ನಾಗಚೈತನ್ಯ ಬೇರೆಯಾಗಿದ್ದಕ್ಕೆ ಕಾರಣಗಳು ಏನೇನು ಎಂದು ಈಗಾಗಲೇ ಹಲವು ರೂಮರ್ ಗಳು ಹರಡಿವೆ. ಆದರೆ ಸಮಂತಾ ಆಗಲೀ, ನಾಗಚೈತನ್ಯ ಆಗಲೀ ಈ ಬಗ್ಗೆ ಎಲ್ಲೂ ತುಟಿಪಿಟಕ್ ಎಂದಿರಲಿಲ್ಲ.

ಆದರೆ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಳ್ಳಲಿರುವ ಸಮಂತಾ ವಿಚ್ಛೇದನಕ್ಕೆ ನಿಜ ಕಾರಣವೇನೆಂದು ಹೇಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದು ಎಷ್ಟು ನಿಜ ಎಂಬುದು ಕಾರ್ಯಕ್ರಮ ಪ್ರಸಾರವಾದಾಗಲೇ ತಿಳಿದುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ