ಸ್ಯಾಂಡಲ್ ವುಡ್ ನ ಈ ಪ್ರಮುಖರಿಗೆ ಇಂದು ಬರ್ತ್ ಡೇ

ಭಾನುವಾರ, 15 ಆಗಸ್ಟ್ 2021 (10:21 IST)
ಬೆಂಗಳೂರು: ಸ್ವಾತಂತ್ರ್ಯ ದಿನವೇ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಒಂದು ರೀತಿಯಲ್ಲಿ ವಿಶೇಷವೇ. ಸ್ಯಾಂಡಲ್ ವುಡ್ ನಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೂವರು ಪ್ರಮುಖರಿದ್ದಾರೆ.


ಮೊದಲನೆಯದಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 71 ವರ್ಷದ ಭಾರತಿ ವಿಷ್ಣುವರ್ಧನ್ ಡಾ.ರಾಜ್, ವಿಷ್ಣುವರ್ಧನ್ ರಿಂದ ಹಿಡಿದು ಎಲ್ಲಾ ದಿಗ್ಗಜ ನಟರೊಂದಿಗೆ ನಟಿಸಿದ ಹಿರಿಮೆಯ ಕಲಾವಿದೆ. ಇಂದು ಅವರ ಜನ್ಮದಿನದ ಅಂಗವಾಗಿ ಅವರ ಕುರಿತಾದ ಸಾಕ್ಷ್ಯ ಚಿತ್ರದ ತುಣುಕು ಹೊರಬರುತ್ತಿದೆ.

ಇನ್ನು, ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರೂ ಇಂದೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ದೊಡ್ಮನೆ ಮಗ ರಾಘಣ್ಣನಿಗೆ ಅಭಿಮಾನಿಗಳು ಶುಭಾಷಯಗಳ ಸುರಿಮಳೆ ಸುರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ