ಡ್ರಗ್ ಮಾಫಿಯಾ: ಸಂಜನಾ ಗಲ್ರಾನಿ ವಶಕ್ಕೆ ಪಡೆದ ಸಿಸಿಬಿ

ಮಂಗಳವಾರ, 8 ಸೆಪ್ಟಂಬರ್ 2020 (09:50 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ದ್ವಿವೇದಿ ಬಳಿಕ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.


ಇಂದು ಬೆಳಿಗ್ಗೆ ಸಂಜನಾ ಅಪಾರ್ಟ್ ಮೆಂಟ್ ಗೆ ಆಗಮಿಸಿದ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇನ್ನೂ ಬಂಧಿಸಿಲ್ಲ ಎಂದು ಸಿಸಿಬಿ ಸ್ಪಷ್ಟಪಡಿಸಿದೆ. ಸಂಜನಾಗೆ ಸಂಬಂಧಿಸಿದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಅವರ ವಾಹನ, ಮನೆಯನ್ನೂ ತಪಾಸಣೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ