ಬೆಂಗಳೂರು: 2021 ಇನ್ನೇನು ಮಗಿಯುತ್ತಾ ಬಂತು. ಕೊರೋನಾ, ಲಾಕ್ ಡೌನ್ ಗಳ ನಡುವೆ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗಿ ಗೆದ್ದ ಸಿನಿಮಾಗಳು ಯಾವುವು ನೋಡೋಣ.
ರಾಬರ್ಟ್: ಲಾಕ್ ಡೌನ್ ಮುಗಿದ ತಕ್ಷಣ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿತ್ತು. ಚಿತ್ರರಂಗಕ್ಕೆ ಹೊಸ ಭರವಸೆ ಕೊಟ್ಟ ಚಿತ್ರವಿದು.
ಪೊಗರು: ರಾಬರ್ಟ್ ಬಳಿಕ ಚಿತ್ರರಂಗಕ್ಕೆ ಮತ್ತೊಂದು ಹಿಟ್ ಕೊಟ್ಟಿದ್ದು ಧ್ರುವ ಸರ್ಜಾ ಅಭಿನಯದ ಪೊಗರು. ಆರಂಭದಲ್ಲಿ ಕೊಂಚ ವಿವಾದಕ್ಕೀಡಾಗಿದ್ದರೂ ಗಳಿಕೆಗೆ ಯಾವುದೇ ತೊಂದರೆಯಾಗಲಿಲ್ಲ.
ಯುವರತ್ನ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿ ಈ ವರ್ಷ ತೆರೆ ಕಂಡ ಸಿನಿಮಾ ಯುವರತ್ನ. ಈ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಕ್ಕೆ ಚಿತ್ರಮಂದಿರದಲ್ಲಿ ಮತ್ತೆ ಶೇ.50 ಹಾಜರಾತಿಗೆ ಸರ್ಕಾರ ಆದೇಶ ನೀಡಿತ್ತು. ಇದರಿಂದಾಗಿ ಗಳಿಕೆಗೆ ಕೊಂಚ ಹಿನ್ನಡೆಯಾಯಿತು. ಆದರೆ ಒಟಿಪಿಯಲ್ಲಿ ಭರ್ಜರಿ ಮೊತ್ತಕ್ಕೆ ಸೇಲ್ ಆಯಿತು.
ಸಲಗ, ಕೋಟಿಗೊಬ್ಬ 3: ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿದ್ದ ಸಲಗ ಸಿನಿಮಾ ಹಿಟ್ ಆಯಿತು. ಇದರ ಜೊತೆಗೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾದರೂ ಸಲಗನ ಗಳಿಕೆಗೆ ತೊಂದರೆಯಾಗಲಿಲ್ಲ. ಅತ್ತ ಕೋಟಿಗೊಬ್ಬ 3 ಆರಂಭದ ದಿನವೇ ತಾಂತ್ರಿಕ ಸಮಸ್ಯೆಗೊಳಗಾದರೂ ನಿರ್ಮಾಪಕರ ಜೇಬಿಗೆ ನಷ್ಟ ಮಾಡಲಿಲ್ಲ.
ಗರುಡಗಮನ ವೃಷಭ ವಾಹನ: ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಬಂದಿರುವ ಈ ಸಿನಿಮಾ ಸ್ಟಾರ್ ಕಾಸ್ಟ್ ಇಲ್ಲದೇ ಹೋದರೂ ಕತೆಯಿಂದಲೇ ಜನಮನ ಗೆದ್ದಿತು.
ಸಖತ್: ಬಹಳ ದಿನಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಬಿಡುಗಡೆಯಾಗಿದ್ದು, ಅವರ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿ, ಈಗ ಸೂಪರ್ ಹಿಟ್ ಆಗುವತ್ತ ಸಾಗುತ್ತಿದೆ.