ಕನ್ನಡದ ಮೂವರು ದಿಗ್ಗಜರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಸೋಮವಾರ, 18 ಸೆಪ್ಟಂಬರ್ 2023 (08:50 IST)
WD
ಬೆಂಗಳೂರು: ಕನ್ನಡ ಮೂವರು ದಿಗ್ಗಜ ಕಲಾವಿದರಿಗೆ ಇಂದು ಒಂದೇ ದಿನ ಜನ್ಮದಿನದ ಸಂಭ್ರಮ. ಸಾಹಸಸಿಂಹ ಡಾ. ವಿಷ್ಣುವರ್ಧನ್, ಉಪೇಂದ್ರ, ನಟಿ ಶ್ರುತಿಗೆ ಇಂದು ಜನ್ಮದಿನ.

ಸಾಹಸಸಿಂಹ ಡಾ. ವಿಷ್ಣುವರ್ಧನ್ 73 ನೇ ಜನ್ಮಜಯಂತಿ ಇಂದು. ಇದರ ಪ್ರಯುಕ್ತ ಇಂದು ಮೈಸೂರಿನ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಜತ್ಕಾರ್ ಅಭಿಮಾನಿಗಳೊಂದಿಗೆ ಕಾಲ ಕಳೆಯಲಿದ್ದಾರೆ.

ಇನ್ನು, ರಿಯಲ್ ಸ್ಟಾರ್ ಉಪೇಂದ್ರಗೆ ಈ ಬಾರಿ ಜನ್ಮದಿನ ವಿಶೇಷವಾಗಿದೆ. ಅವರು ನಿರ್ದೇಶಿಸಿ, ನಟಿಸಿರುವ ಯುಐ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಲಿದೆ. ಜೊತೆಗೆ ಅಪರಾಹ್ನವಿಡೀ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದಾರೆ.

ಇನ್ನು, ಕನ್ನಡ ಚಿತ್ರರಂಗದ ಎವರ್ ‍ಗ್ರೀನ್ ಹೀರೋಯಿನ್ ಶ್ರುತಿ ಕೃಷ್ಣ ತಮ್ಮ ಕುಟುಂಬದವರೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಈ ಮೂರೂ ತಾರೆಯರಿಗೆ ನಮ್ಮ ಕಡೆಯಿಂದ ಹ್ಯಾಪೀ ಬರ್ತ್ ಡೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ