ಏಕದಿನ ಕ್ರಿಕೆಟ್ ನಲ್ಲಿ ನಂ.1 ಆಗಲು ಟೀಂ ಇಂಡಿಯಾ ಏನು ಮಾಡಬೇಕು?

ಭಾನುವಾರ, 17 ಸೆಪ್ಟಂಬರ್ 2023 (09:30 IST)
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಏಕದಿನ ಕ್ರಿಕೆಟ್ ನಲ್ಲಿ ಮತ್ತೆ ನಂ.1 ಆಗುವ ಅವಕಾಶವಿದೆ.

ಸದ್ಯಕ್ಕೆ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾವಿದೆ. ಇದೀಗ ಎರಡೂ ತಂಡಗಳನ್ನು ಮೀರಿಸುವ ಅವಕಾಶ ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾಗೆ ಬಂದಿದೆ.

ಏಷ್ಯಾ ಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದರೆ ಟೀಂ ಇಂಡಿಯಾಗೆ ನಂ.1 ಆಗುವ ಅವಕಾಶವಿದೆ. ಹೀಗಾದಲ್ಲಿ ಏಕದಿನ ವಿಶ್ವಕಪ್ ಗೆ ನಂ.1 ಏಕದಿನ ತಂಡವಾಗಿ ಪ್ರವೇಶ ಪಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ