ಉಪ್ಪಿ ಯುಐ ಟೀಸರ್ ಲಾಂಚ್ ಮಾಡಲಿರುವ ಶಿವರಾಜ್ ಕುಮಾರ್

ಭಾನುವಾರ, 17 ಸೆಪ್ಟಂಬರ್ 2023 (09:10 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ನಂತರ ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾದ ಟೀಸರ್ ಅವರ ಹುಟ್ಟುಹಬ್ಬದಂದು ಸೋಮವಾರ ಬಿಡುಗಡೆಯಾಗಲಿದೆ.

ಈ ಟೀಸರ್ ಲಾಂಚ್ ಜೊತೆಗೆ ಉಪೇಂದ್ರ ಅಭಿಮಾನಿಗಳನ್ನೂ ಭೇಟಿ ಮಾಡಲಿದ್ದಾರೆ. ಅಲ್ಲಿಯೇ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಲಿದ್ದಾರೆ.

ಊರ್ವಶಿ ಥಿಯೇಟರ್ ನಲ್ಲಿ ಯುಐ ಟೀಸರ್ ಲಾಂಚ್ ಆಗಲಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಟೀಸರ್ ಲಾಂಚ್ ಮಾಡಲಿದ್ದಾರೆ. ಅಂದು ಉಪ್ಪಿ ಹುಟ್ಟುಹಬ್ಬವಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಸಂಜೆ 6.30 ಕ್ಕೆ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ