ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ಎಷ್ಟೋ ಜನ ಸಂಕಷ್ಟದಲ್ಲಿರುವಾಗ ಸ್ಯಾಂಡಲ್ ವುಡ್ ನ ಕೆಲವು ಕಲಾವಿದರು ತಮ್ಮ ಸಂಗಡಿಗರೊಂದಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಲು ಫೀಲ್ಡಿಗಿಳಿದಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್, ಶ್ರೀಮುರಳಿ, ಕಿರಣ್ ರಾಜ್, ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ, ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಮುಂತಾದ ನಟ-ನಟಿಯರು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗ ಬಡವರಿಗೆ ದಿನಸಿ, ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಕಿಚ್ಚ ಸುದೀಪ್ ಕೊರೋನಾ ರೋಗಿಗಳಿಗೆ ಅಗತ್ಯವಾದ ಆಕ್ಸಿಜನ್ ಪೂರೈಸಲು ಮುಂದಾಗಿದ್ದಾರೆ. ಅಲ್ಲದೆ, ಕೊರೋನಾದಿಂದ ಮೃತಪಟ್ಟ ಚಾಮರಾಜನಗರದ ಕುಟುಂಬಗಳಿಗೆ ನೆರವಾಗಿದ್ದಾರೆ. ಅದೇ ರೀತಿ ನಿರ್ಮಾಪಕ ವಿಜಯ್ ಕಿರಗಂದೂರ್ ಕೂಡಾ ಮಂಡ್ಯ ಜಿಲ್ಲೆಗೆ ನೆರವಿನ ಹಸ್ತ ಚಾಚಿದ್ದಾರೆ. ಸಾಹಿತಿ ಕವಿರಾಜ್ ಕೂಡಾ ಆಕ್ಸಿಜನ್ ಪೂರೈಸುವ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದಾರೆ. ಈ ಸಂಕಷ್ಟ ಸಮಯದಲ್ಲಿ ತಮ್ಮನ್ನೇ ದೇವರಂತೆ ಆರಾಧಿಸುವ ಅಭಿಮಾನಿಗಳಿಗೆ ಕಲಾವಿದರು ನೆರವಿಗೆ ಬರುತ್ತಿರುವುದು ಶ್ಲಾಘನೀಯ.