ಕೊರೋನಾ ಕಾರಣಕ್ಕೆ ಬ್ರಿಟನ್ ಪ್ರವಾಸ ರದ್ದು ಮಾಡಿದ ಪ್ರಧಾನಿ ಮೋದಿ

ಬುಧವಾರ, 12 ಮೇ 2021 (10:09 IST)
ನವದೆಹಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಗೆ ತೆರಳಬೇಕಾಗಿದ್ದ ಪ್ರಧಾನಿ ಮೋದಿ ಕೊರೋನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಪ್ರವಾಸ ರದ್ದು ಮಾಡಿದ್ದಾರೆ.


ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿ7 ಶೃಂಗ ಸಭೆಯಲ್ಲಿ ಪ್ರಧಾನಿ ಭಾಗವಹಿಸುತ್ತಿಲ್ಲ.  ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖುದ್ದಾಗಿ ಮೋದಿಗೆ ಆಹ್ವಾನ ನೀಡಿದ್ದರು.

ಆದರೆ ಪ್ರಸಕ್ತ ಸನ್ನಿವೇಶದ ಹಿನ್ನಲೆಯಲ್ಲಿ ಪ್ರಧಾನಿ ಖುದ್ದಾಗಿ ಬ್ರಿಟನ್ ಗೆ ಭೇಟಿ ನೀಡಿ ಶೃಂಗದಲ್ಲಿ ಪಾಲ್ಗೊಳ್ಳಲಾಗದು ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ. ಬದಲಾಗಿ ಆನ್ ಲೈನ್ ಮೂಲಕ ಸಮಾವೇಶದಲ್ಲಿ ಭಾಗಿಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ