ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು
ಭಾನುವಾರ, 1 ನವೆಂಬರ್ 2020 (10:42 IST)
ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ನಿಮಿತ್ತ ಸ್ಯಾಂಡಲ್ ವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.
ಕನ್ನಡ ಕವನಗಳು, ಕನ್ನಡದ ಸಾಲುಗಳು ಮತ್ತು ಕನ್ನಡ ಬಾವುಟದ ಫೋಟೋಗಳ ಮೂಲಕ ತಾರೆಯರು ಶುಭ ಹಾರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಜಗ್ಗೇಶ್, ಪ್ರಿಯಾಂಕ ಉಪೇಂದ್ರ, ರಮೇಶ್ ಅರವಿಂದ್, ಸುಮಲತಾ ಅಂಬರೀಶ್, ತಾರಾ ಅನುರಾಧ, ಅನಿರುದ್ಧ್, ವಿಜಯ್ ಸೂರ್ಯ ಸೇರಿದಂತೆ ಅನೇಕ ನಟ-ನಟಿಯರು ಶುಭ ಹಾರೈಸಿದ್ದಾರೆ.