ರಿಯಲ್ ಸ್ಟಾರ್ ಉಪೇಂದ್ರ ಯುಐ ಟೀಸರ್ ಲಾಂಚ್ ಗೆ ಕ್ಷಣಗಣನೆ
ಉಪೇಂದ್ರ ಸಿನಿಮಾಗಳೆಂದರೆ ಅದಕ್ಕೆ ಅದರದ್ದೇ ಆದ ಪ್ರತ್ಯೇಕತೆಗಳಿರುತ್ತವೆ. ಹೀಗಾಗಿ ಅವರ ಸಿನಿಮಾಗಳನ್ನು ನೋಡಲು ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇರುತ್ತದೆ.
ಇಂದು ಉಪೇಂದ್ರ ಜನ್ಮದಿನವಾಗಿದ್ದು ಬಹಳ ದಿನಗಳ ನಂತರ ಅವರು ನಿರ್ದೇಶಿಸಿರುವ ಯುಐ ಟೀಸರ್ ಲಾಂಚ್ ಆಗುತ್ತಿದೆ. ಇಂದು ಸಂಜೆ 6.30 ಕ್ಕೆ ಊರ್ವಶಿ ಥಿಯೇಟರ್ ನಲ್ಲಿ ಚಿತ್ರದ ಟೀಸರ್ ಲಾಂಚ್ ಆಗಲಿದೆ. ಇದಕ್ಕೆ ಅಭಿಮಾನಿಗಳನ್ನೂ ಆಹ್ವಾನಿಸಲಾಗಿದೆ. ಟೀಸರ್ ಲಾಂಚ್ ಗೆ ವಿಶೇಷ ಆಹ್ವಾನಿತರಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಾರೆ.