ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ ಧ್ರುವ ಸರ್ಜಾ

ಸೋಮವಾರ, 18 ಸೆಪ್ಟಂಬರ್ 2023 (17:03 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬಕ್ಕೆ ಮತ್ತೋರ್ವ ಸದಸ್ಯನ ಆಗಮನವಾಗಿದೆ. ಧ್ರುವ ಸರ್ಜಾ ದಂಪತಿಗೆ ಗಂಡು ಮಗುವಾಗಿದೆ.

ಇಂದು ಗಣೇಶ ಹಬ್ಬದ ಸಂಭ‍್ರಮದ ನಡುವೆ ಸರ್ಜಾ ಫ್ಯಾಮಿಲಿ ಜ್ಯೂ.ಧ್ರುವ ಸರ್ಜಾನನ್ನು ಬರಮಾಡಿಕೊಂಡಿದ್ದಾರೆ.  ಮಗ ಹುಟ್ಟಿದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಧ್ರುವ ಹಂಚಿಕೊಂಡಿದ್ದಾರೆ.

‘ರಾಯನ್ ನನಗೆ ಮೊದಲ ಮಗ. ಬಳಿಕ ಮಗಳು ಹುಟ್ಟಿದಳು. ಈಗ ಮಗ ಹುಟ್ಟಿದ್ದಾನೆ. ನನಗೆ ಮೂವರು ಮಕ್ಕಳು’ ಎಂದು ಮಾಧ‍್ಯಮದ ಮುಂದೆ ಧ್ರುವ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು, ಸರ್ಜಾ ಕುಟುಂಬಕ್ಕೆ ಕುಟುಂಬಸ್ಥರು, ಅಭಿಮಾನಿಗಳು, ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ