ಮಕ್ಕಳನ್ನು ಹೆರಲು ಲೈಸೆನ್ಸ್ ಇರಬೇಕು ಎಂದ ಸಂಜನಾ

ಶನಿವಾರ, 31 ಡಿಸೆಂಬರ್ 2016 (11:07 IST)
ಗಂಡಹೆಂಡತಿ ಸಂಜನಾ ಏನೇ ಹೇಳಿದರೂ ಅದಕ್ಕೊಂದು ವಿವಾದ ಅಂಟಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆಗಾಗ ಅವರು ಕೆಲವೊಂದು ಒಳ್ಳೇ ಸಂಗತಿಗಳನ್ನೂ ಹೇಳುತ್ತಿರುತ್ತಾರೆ. ಈ ಸಲ ಅವರು ಮಕ್ಕಳು ತಾಯಂದಿರ ಬಗ್ಗೆ ಹೇಳಿದ್ದಾರೆ. ಮಕ್ಕಳನ್ನು ಹೆರಬೇಕು ಅಂದ್ರೆ ತಾಯಂದಿರಿಗೆ ಲೈಸೆನ್ಸ್ ಕೊಡಬೇಕು ಎಂದಿದ್ದಾರೆ.
 
ಗಾಡಿ ಓಡಿಸೋದಕ್ಕೆ ಲೈಸೆನ್ಸ್ ಇರುತ್ತೆ, ಯಾವುದೇ ಒಂದು ವಸ್ತು ತಯಾರಿಸಬೇಕಾದರೆ, ಮಾರಾಟ ಮಾಡಲು ಲೈಸೆನ್ಸ್ ಬೇಕು. ಅದೇ ರೀತಿ ಮಕ್ಕಳನ್ನು ಹೆರೋದಕ್ಕೂ ಲೈಸೆನ್ಸ್ ಬೇಕು ಎನ್ನುತ್ತಿದ್ದಾರೆ. ಕೆಲವು ಮಹಿಳೆಯರು ಮಕ್ಕಳನ್ನು ಬಾಡಿಗೆಗೆ ತೆಗೆದುಕೊಂಡು ಬಂದು ಭಿಕ್ಷೆ ಬೇಡುತ್ತಿದ್ದಾರೆ. ಇನ್ನೂ ಕೆಲವರು ಸಂಪಾದನೆಗಾಗಿಯೇ ಮಕ್ಕಳನ್ನು ಹೆರುತ್ತಿದ್ದಾರೆ.
 
ಅಂತಹ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಕೊಟ್ಟು ಇನ್ನು ಮುಂದೆ ಭಿಕ್ಷೆ ಬೇಡಬಾರದು ಎಂದು ಹೇಳಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಉರಿಬಿಸಿಲಲ್ಲಿ ಜೀವಚ್ಛವವಾಗಿ ಬಿದ್ದಿರುವುದನ್ನು ನೋಡಿದರೆ ದುಃಖವಾಗುತ್ತದೆ. ಅವರಿಗೆ ತಿನ್ನಲು ಊಟ, ಸರಿಯಾದ ಬಟ್ಟೆ ಕೂಡ ಇರಲ್ಲ.
 
ಇದೇ ತರಹ ಎಷ್ಟೋ ಮಂದಿ ಬಾಲ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ಆ ರೀತಿ ಬಾಲಕಾರ್ಮಿಕರು ತಯಾರಾಗಬಾರದು ಎಂದರೆ ಮಕ್ಕಳನ್ನು ಹೆರಲು ತಾಯಂದಿರಿಗೆ ಲೈಸೆನ್ಸ್ ವಿಧಾನ ಆರಂಭಿಸಬೇಕು. ಮಹಿಳೆಯರಿಗೆ ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಇದೆಯೇ ಎಂದು ತಿಳಿದುಕೊಂಡು ಲೈಸೆನ್ಸ್ ಕೊಡಬೇಕು. ಲೈಸೆನ್ಸ್ ಇಲ್ಲದವರು ಮಕ್ಕಳನ್ನು ಹೆತ್ತರೆ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ ಸಂಜನಾ ಮೇಡಂ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ