'ಸಂಜು ವೆಡ್ಸ್‌ ಗೀತಾ' ಸಿನಿಮಾದಲ್ಲಿ ‘ರಮ್ಯಾ‘ರಂತೆ ‘ರಚ್ಚು‘ ಕಾಣುತ್ತಾರಾ ಎಂದಿದ್ದಕ್ಕೆ ಸಾಧುಕೋಕಿಲ ಏನಂದ್ರು ಗೊತ್ತಾ

Sampriya

ಮಂಗಳವಾರ, 20 ಆಗಸ್ಟ್ 2024 (16:54 IST)
Photo Courtesy X
ಬೆಂಗಳೂರು: ಕಳೆದ ಎಂಟು ವರ್ಷದಲ್ಲಿ ರಚಿತಾ ರಾಮ್‌ ಅಂತಹ ಬ್ಯುಟಿಫುಲ್ ಹೀರೋಯಿನ್ ನಾನು ನೋಡಿಲ್ಲ, ಸಂಜು ವೆಡ್ಸ್‌ ಗೀತ 2 ಸಿನಿಮಾದಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಾರೆಂದು ಎಂದು ಹಾಸ್ಯ ನಟ ಸಾಧುಕೋಕಿಲ ಹೇಳಿದರು.

ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿದ್ದು, ನಿನ್ನೆ ಸಿನಿಮಾದ ಬಗ್ಗೆ ಸುದ್ದಿಗೋಷ್ಠಿ ಕರೆಯಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರು ಸಂಜು ವೆಡ್ಸ್ ಗೀತಾ 1ನಲ್ಲಿ ರಮ್ಯಾ ಅವರನ್ನು ತುಂಬಾನೇ ಬ್ಯುಟಿಫುಲ್ ಆಗಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ರಚಿತಾ ರಾಮ್‌ ಅವರನ್ನು ಹೇಗೇ ತೋರಿಸಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.


ಇದಕ್ಕೆ ಪ್ರಶ್ನಿಸಿದ ಸಾಧು ಕೋಕಿಲ ಅವರು ಕಳೆದ 8 ವರ್ಷದಿಂದ ರಚಿತಾ ರಾಮ್‌ ಅಂತಹ ಬ್ಯುಟಿಫುಲ್ ನಟಿಯನ್ನು ನಾನು ನೋಡಿಲ್ಲ,  ಇನ್ನೂ ಚೆನ್ನಾಗಿ ತೋರಿಸಿದ್ದಾರೆ. ಬ್ಯುಟಿಫುಲ್ ಹೀರೋಯಿನ್‌ ಇರುವಾಗ ಒಳ್ಳೆಯ ದೃಶ್ಯ ಸೆರೆಯಾಗುತ್ತದೆ, ಅದೇ ತರಹ ನಿರ್ದೇಶಕರಿಗೆ ಮೂಡ್‌ ಬರುತ್ತೇ, ಹೀರೋಗಳಿಗೂ ಒಳ್ಳೆಯ ಸಾಂಗ್ ಬರುತ್ತೇ, ಒಳ್ಳೆಯ ಸಿನಿಮಾನೂ ಆಗುತ್ತೆ ಎಂದರು.

ಇನ್ನೂ ರೀಲ್‌ ವೈರಲ್ ಆಗಿದ್ದು, ಇದನ್ನು ನೋಡಿದವರು ಸರ್ ಹಾಗಾದ್ರೆ ಸೋನು ಗೌಡ ಕಥೆ ಏನು ಎಂದ್ರೆ, ಮತ್ತೊಬ್ಬರು ಸಾಧು ಏನ್ ಹೇಳಿದ್ರು ಕಾಮಿಡಿ ಅನ್ಸುತ್ತೆ ಎಂದು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ