ಪುನೀತ್-ಸಂತೋಷ್ ಆನಂದ್ ರಾಮ್ ಮತ್ತೆ ಜೊತೆ ಸೇರುವುದು ಪಕ್ಕಾ

ಶನಿವಾರ, 16 ಜನವರಿ 2021 (11:09 IST)
ಬೆಂಗಳೂರು: ರಾಜಕುಮಾರ, ಯುವರತ್ನ ಸಿನಿಮಾ ಬಳಿಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆ ಸಿನಿಮಾ ಮಾಡಲಿದ್ದಾರೆ.


ಈ ಬಗ್ಗೆ ಇದೀಗ ಸ್ವತಃ ಸಂತೋಷ್ ಆನಂದ್ ರಾಮ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಯುವರತ್ನ ಬಳಿಕ ಮುಂದಿನ ಸಿನಿಮಾ ಯಾವಾಗ ಎಂದು ಕೇಳುತ್ತಿದ್ದಿರಿ. ಮತ್ತೆ ನನ್ನ ಐಕಾನ್ ಪವರ್ ಸ್ಟಾರ್ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ನೀಡಲಿದ್ದೇನೆ ಎಂದು ಅಧಿಕೃತವಾಗಿ ಸಂತೋಷ್ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ