ಪ್ರೇಮಿಗಳ ದಿನದಂದೇ ಪ್ರಿಯತಮೆಯನ್ನು ಪರಿಚಯಿಸಿದ ಲಕ್ಷ್ಮಿ ಬಾರಮ್ಮ ಸೀರಿಯಲ್ ನಟ

Sampriya

ಶುಕ್ರವಾರ, 14 ಫೆಬ್ರವರಿ 2025 (17:39 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ ಮೂಲಕ ಜನಮನ್ನಣೆ ಗಳಿಸಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ವೈಷ್ಣವ್ ಪಾತ್ರದಲ್ಲಿ ಮಿಂಚುತ್ತಿರುವ ನಟ ಶಮಂತ್ ಗೌಡ ಅವರು ಪ್ರೇಮಿಗಳ ದಿನದಂದು ತಮ್ಮ ಪ್ರಿಯತಮೆಯನ್ನು ಪರಿಚಯಿಸಿದ್ದಾರೆ.

ಶಮಂತ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್‌ಗಳನ್ನು ಹಂಚುತ್ತಾ ಬಿಗ್‌ಬಾಸ್‌ ವೇದಿಕೆಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲೂ ತಮ್ಮ ಸರಳ ವ್ಯಕ್ತಿತ್ವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದ ಹಾಗೇ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಹೀರೋ ಆಗಿ ಕಿರುತೆರೆಗೆ ಕಾಲಿಟ್ಟರು.

ಕಳೆದ ಅನುಬಂಧ ವೇದಿಕೆಯಲ್ಲಿ ಶಮಂತ್ ಗೌಡ ಅವರು ಮುಂದಿನ ಬಾರಿ ತಮ್ಮ ಹುಡುಗಿಯನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದರು.

ಈ ಮೂಲಕ ಪ್ರೀತಿಯಲ್ಲಿ ಬಿದ್ದಿರುವ ಸುಳಿವು ನೀಡಿದ್ದರು. ಇದೀಗ ಪ್ರೇಮಿಗಳ ದಿನದಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡು ನ್ಯೂ ಚಾಪ್ಟರ್‌ ಅನ್‌ಲಾಕ್‌ಡ್‌ ಎಂದು ಬರೆದುಕೊಂಡಿದ್ದಾರೆ.  

ಆದರೆ ಹುಡುಗಿಯ ಹೆಸರನ್ನು ಅವರು ಹೇಳಿಲ್ಲ.  ಈ ಪೋಸ್ಟ್‌ಗೆ ನಟಿ ದಿವ್ಯಾ ಉರುಡುಗ ಶುಭಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ