ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ
ಗುರುವಾರ, 11 ಅಕ್ಟೋಬರ್ 2018 (07:07 IST)
ಬೆಂಗಳೂರು : ಇತ್ತೀಚೆಗೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ಟಾಲಿವುಡ್, ಬಾಲಿವುಡ್ ಆಯ್ತು ಇದೀಗ ಸ್ಯಾಂಡಲ್ ವುಡ್ ನ ಕಡೆಯೂ ಈ ಆರೋಪ ಕೇಳಿಬರುತ್ತಿದೆ.
ಹೌದು. ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ,ಗಾಯಕ ರಘ ದೀಕ್ಷಿತ್ ಮೇಲೆ ಗಾಯಕಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಈಕೆ ಈ ಹಿಂದೆ ತಮಿಳಿನ ಪ್ರಸಿದ್ಧ ಗೀತಸಾಹಿತಿಯೊಬ್ಬರ ಮೇಲೂ ಇದೇರೀತಿ ಆರೋಪ ಮಾಡಿದ್ದಳು.
ಈಗ ಈ ಹಿಂದೆ ರಘ ದೀಕ್ಷಿತ್ ರೆಕಾರ್ಡಿಂಗ್ ಸ್ಟುಡಿಯೋಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದರು. ಆದರೆ ಸಂಗೀತ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕೆಂಬ ಕಾರಣಕ್ಕೆ ತಾನೂ ಇಷ್ಟು ವರ್ಷ ಸುಮ್ಮನಿದ್ದೆ ಎಂದು ಆರೋಪಿಸಿದ್ದಾಳೆ. ಆದರೆ ರಘ ದೀಕ್ಷಿತ್ ಮಾತ್ರ ನಾನು ಯಾವ ತಪ್ಪು ಮಾಡಿಲ್ಲ ಎಂದು ಟ್ವೀಟರ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ