ನವರಾತ್ರಿಯಂದು ಇವುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

ಬುಧವಾರ, 10 ಅಕ್ಟೋಬರ್ 2018 (08:55 IST)
ಬೆಂಗಳೂರು : ನವರಾತ್ರಿ ಶುರುವಾಗಿದೆ. ಈ 9 ದಿನ ಭಕ್ತರು ದೇವಿ ದುರ್ಗೆಯ ವಿವಿಧ ರೂಪವನ್ನು ಪೂಜೆ ಮಾಡಿ ವೃತ ಕೈಗೊಂಡು ವರ ಬೇಡ್ತಾರೆ. ಆದ್ರೆ ಈ 9 ದಿನ ನಾವು ಮಾಡುವ ಕೆಲವೊಂದು ಕೆಲಸಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.


ನವರಾತ್ರಿಯಲ್ಲಿ ಮಾಂಸಾಹಾರ ಸೇವನೆ ನಿಶಿದ್ಧ. ತಾಯಿ ದುರ್ಗೆ ವೃತ ಮಾಡುವವರು ಮಾಂಸಾಹಾರದಿಂದ ದೂರವಿರಬೇಕು.
ನವರಾತ್ರಿ ವೃತ ಮಾಡುವವರು ಕೂದಲು ಕತ್ತರಿಸಬಾರದು. ಹಾಗೆ ಶೇವಿಂಗ್ ಮಾಡುವುದು ಶುಭವಲ್ಲ. ಆದ್ರೆ ಮಕ್ಕಳಿಗೆ ಮೊದಲ ಬಾರಿ ಕೇಶಮುಂಡನ ಮಾಡಿಸುವುದು ಶುಭ.


ನವರಾತ್ರಿಯಲ್ಲಿ ಕಳಶವಿಟ್ಟು, ಅಖಂಡ ಜ್ಯೋತಿ ಬೆಳಗಿದ್ದರೆ ಮನೆಯ ಬೀಗ ಹಾಕಿ ಹೊರಗೆ ಹೋಗಬಾರದು.
ಮಾಂಸಾಹಾರವೊಂದೇ ಅಲ್ಲ ಈರುಳ್ಳಿ, ಬೆಳ್ಳುಳ್ಳಿಯಿಂದ ದೂರವಿರಬೇಕು. ನವರಾತ್ರಿಯ 9 ದಿನಗಳ ಕಾಲ ನಿಂಬೆ ಹಣ್ಣನ್ನು ಕತ್ತರಿಸುವುದು ಅಶುಭ.


ನವರಾತ್ರಿಯಲ್ಲಿ ಮಧ್ಯಾಹ್ನ ನಿದ್ರೆ ಮಾಡಿದ್ರೆ ಪೂಜೆಯ ಶುಭ ಫಲ ಲಭಿಸುವುದಿಲ್ಲವೆಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ