ಸನ್ನಿಲಿಯೋನಾ ವೀರಮಹಾದೇವಿ ಚಿತ್ರದಲ್ಲಿ ನಟಿಸಬಾರದಂತೆ. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ ನೋಡಿ

ಬುಧವಾರ, 10 ಅಕ್ಟೋಬರ್ 2018 (08:48 IST)
ಬೆಂಗಳೂರು : ಬೆಂಗಳೂರಿಗೆ  ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರ ತಾರೆ ಸನ್ನಿಲಿಯೋನಾ ಬರಬಾರದು ಎಂದು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸನ್ನಿಲಿಯೋನಾ ವಿರುದ್ಧ ಸಿನಿಮಾವೊಂದರ ವಿಚಾರದಲ್ಲಿ ಸಮರ ಸಾರುತ್ತಿದ್ದಾರೆ.


ಹೌದು. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು  ನಟಿ ಸನ್ನಲಿಯೋನಾ ರೆಡಿಯಾಗಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬಾರದೆಂದು ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.


ಆದರೆ ಇದೀಗ ವೀರಮಹಾದೇವಿ ಚಿತ್ರದಲ್ಲಿ ನಟಿ ಸನ್ನಲಿಯೋನಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದು ಐತಿಹಾಸಿಕ ಚಿತ್ರವಾದ್ದರಿಂದ ಈ ಚಿತ್ರದಲ್ಲಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಬಾರದು. ಇದು ಅಪರಾಧ ಯಾವುದೇ ಕಾರಣಕ್ಕೂ ಚಿತ್ರೀಕರಣ ನಡೆಯಬಾರದು ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ