ತರುಣ್, ಸೋನಲ್ ಅರಿಶಿನ ಶಾಸ್ತ್ರದಲ್ಲಿ ಕುಣಿದು ಕುಪ್ಪಳಿಸಿದ ಶರಣ್, ಪ್ರೇಮ್, ಮೇಘಾ ಶೆಟ್ಟಿ

Sampriya

ಶನಿವಾರ, 10 ಆಗಸ್ಟ್ 2024 (20:25 IST)
Photo Courtesy X
ಬೆಂಗಳೂರು: ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೋ ಅವರ ಅರಿಶಿನ ಶಾಸ್ತ್ರ ನಿನ್ನೆ ಸಂಭ್ರಮ ಸಡಗರದಿಂದ ನಡೆಯಿತು.  

ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ಮಂದಿ ಕುಣಿದು ಕುಪ್ಪಳಿಸಿದರು. ಎಲ್ಲರೂ ಹಳದಿ ಬಣ್ಣದ ಬಟ್ಟೆ  ಧರಿಸಿ, ಒಬ್ಬರಿಗೊಬ್ಬರು ಅರಿಸಿನ ಹಚ್ಚುತ್ತಾ ಸಂಭ್ರಮಿಸಿದರು. ನಟರಾದ ಪ್ರೇಮ್, ಶರಣ್, ಅನಿರುದ್ಧ್, ನಟಿ ಮೇಘಾ ಶೆಟ್ಟಿ ಅವರು ಡ್ಯಾನ್ಸ್ ಮಾಡಿದರು.

ಅರಿಶಿಣ ಶಾಸ್ತ್ರದ ಕ್ಲಿಪ್‌ ಅನ್ನು ತರುಣ್ ಸುಧೀರ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ನಮ್ಮ ಅರಿಶಿಣ ಶಾಸ್ತ್ರ ಪ್ರೀತಿ ಮತ್ತು ಸಂಪ್ರದಾಯದ ಸಂಭ್ರಮವಾಗಿತ್ತು. ಹಳದಿಯ ಆಚರಣೆ ಹೊಳೆಯುವಂತೆ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು.

ರಾಬರ್ಟ್ ಸಿನಿಮಾ ವೇಳೆ ಪ್ರೀತಿಯಲ್ಲಿ ಬಿದ್ದ ಸೋನಲ್ ತರುಣ್ ತಮ್ಮ ಲವ್ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು. ಮದುವೆಗೆ ಬೇಕಿರುವ ತಯಾರಿಗಳನ್ನು ಕೂಡ ಗುಟ್ಟಾಗಿಯೇ ಮಾಡಿಕೊಳ್ಳುತ್ತಿರುವಾಗ ಇವರಿಬ್ಬರ ಪ್ರೀತಿ ವಿಚಾರ ಲೀಕ್ ಆಗಿತ್ತು. ಕೆಲ ದಿನಗಳ ಹಿಂದೆ ಸೋನಾಲ್‌ ಮಂಥೆರೋ ಜೊತೆ ಮದುವೆ ಆಗುತ್ತಿರುವ ವಿಷಯವನ್ನು ನಟ ತರುಣ್‌ ಸುಧೀರ್‌ ಅವರೇ ಅಧಿಕೃತಗೊಳಿಸಿದ್ದರು. ಇಂದು ಇವರಿಬ್ಬರ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ