ನಾಗಮಂಡಲ, ಕೋಲದಲ್ಲಿ ಭಾಗಿಯಾದ ಶಿಲ್ಪಾ ಶೆಟ್ಟಿ ಸರಳತೆಗೆ ಫಿದಾ ಆದ ಕರಾವಳಿಗರು

Sampriya

ಸೋಮವಾರ, 29 ಏಪ್ರಿಲ್ 2024 (17:10 IST)
photo Courtesy Instagram
ಮಂಗಳೂರು:  ಕುಡ್ಲದ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು  ಮುಂಬೈನಲ್ಲಿ ತಮ್ಮ ಬದುಕನ್ನು ಕಟ್ಟಿದ್ದರು, ತಾನು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ.

ನಾನು ತುಳುನಾಡಿನ ಹೆಣ್ಣು ಎಂದು ಹೆಮ್ಮೆಯಿಂದ ಹೇಳುವ ಶಿಲ್ಪಾ ಶೆಟ್ಟಿ ಅವರು ಕಳೆದ ಕೆಲ ದಿನಗಳಿಂದ ತಮ್ಮ ಮನೆತನದ ದೈವ ದೇವರ ಕಾರ್ಯಕ್ರಮದಲ್ಲಿ ಭಾಗಿಯಾದರು.

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ  ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರ ಮಹೋತ್ಸವಕ್ಕೆ ಮಗ, ಮಗಳ ಜತೆ ಪಾಲ್ಗೊಂಡರು.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ರೀಲ್ ಹಂಚಿಕೊಂಡ ಶಿಲ್ಪಾ ಶೆಟ್ಟಿ ಅವರು, ನಾನು ತುಳುನಾಡಿನ ಪೊನ್ನು( ಹೆಣ್ಣು), ನಾನು ಬೆಳೆದು ಬಂದ ದಾರಿ.  ನನ್ನ ಮಕ್ಕಳಿಗೆ ನನ್ನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು. ಮಂಗಳೂರಿನ ನಾಗಮಂಡಲ ಹಾಗೂ ಸಾಂಪ್ರದಾಯಿಕ ಕೊಡಮಂನಿತಯ ದೈವ ಕೋಲದಲ್ಲಿ ಪಾಲ್ಗೊಂಡರು. ನನ್ನ ಮಕ್ಕಳು ವಿಸ್ಮಯಗೊಂಡರು ಮತ್ತು ನಾನು ಅದನ್ನು ಎಷ್ಟು ಬಾರಿ ನೋಡಿದರೂ, ಅಂತಹ ಭಕ್ತಿಯಿಂದ ಅನುಸರಿಸುವ ಶಕ್ತಿ ಮತ್ತು ನಂಬಿಕೆಯನ್ನು ನೋಡಲು ಅದು ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಶಿಲ್ಪಾ ಶೆಟ್ಟಿ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ, ನೀವು ಬೆಳೆದು ಬಂದ ದಾರಿಯನ್ನು ಮರೆಯದೆ, ಮಕ್ಕಳಿಗೂ ಕಲಿಸಿದ್ದೀರಿ. ನಿಮ್ಮನ್ನು ಕೊಡಮಂತ್ತಾಯ ಹಾರೈಸಲಿ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ