ಶಿವಣ್ಣನ ಟಗರು ಟೈಟಲ್ ಸಾಂಗ್ ಆಯ್ತು ವೈರಲ್

ಅತಿಥಾ

ಶುಕ್ರವಾರ, 16 ಫೆಬ್ರವರಿ 2018 (16:36 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಎಲ್ಲ ಸಿನಿಮಾಗಳಿಗೆ ಕ್ರೇಜ್ ಇದ್ದೆ ಇರುತ್ತದೆ. ಆದರೆ 'ಟಗರು' ಸಿನಿಮಾಗೆ ಇರುವ ಕ್ರೇಜ್ ಮಾತ್ರ ಸಿಕ್ಕಾಪಟ್ಟೆ ಜೋರಾಗಿದೆ. ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಫೆಬ್ರವರಿ 23 ರಂದು ಬಿಡುಗಡೆಯಾಗಲಿದೆ.

'ಟಗರು' ಚಿತ್ರದ ಟೈಟಲ್ ಟ್ರ್ಯಾಕ್ 'ಟಗರು ಬಂತು ಟಗರು' ಈಗಾಗಲೇ ಸೂಪರ್ ಹಿಟ್ ಆಗಿದೆ. 'ಟಗರು ಬಂತು ಟಗರು' ಹಾಡು ಕೇಳುಗರಿಗೆ ಹೊಸ ಫೀಲ್‌ ಕೊಡುತ್ತಿದೆ. ಈ ಹಾಡಿಗೆ ತಮಿಳಿನ ಜನಪದ ಗಾಯಕ ಆಂತೋಣಿ ದಾಸನ್‌ ಅವರ ಧ್ವನಿ ನೀಡಿದ್ದಾರೆ.
 
ಈಗಾಗಲೇ 3 ಮಿಲಿಯನ್ ಜನರು ಈ ಹಾಡನ್ನು ವೀಕ್ಷಿಸಿದ್ದು 36 ಲಕ್ಷಕ್ಕೂ ಹೆಚ್ಚು ಹಿಟ್ಸ್ ಬಂದಿವೆ. ವಿಡಿಯೋ ಸಾಂಗ್‌ ಇನ್ನೂ ರಿಲೀಸ್‌ ಆಗದೇ ಆಡಿಯೋಗೆ ಇಷ್ಟೊಂದು ಹಿಟ್‌ ಸಿಕ್ಕಿರೋದು ಇನ್ನಷ್ಟು ವಿಶೇಷ. 
 
'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ಈ ಚಿತ್ರಕ್ಕೆ 'ಎ' ಪ್ರಮಾಣಪತ್ರ ಸಿಕ್ಕಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರದಲ್ಲಿ ಶಿವಣ್ಣ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದು, ವಸಿಷ್ಠ ಸಿಂಹ ಮತ್ತು ಧನಂಜಯ್ ವಿಲನ್ ಗಳಾಗಿ ಅಭಿನಯಿಸಿರುವುದು ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಾನ್ವಿತ ಹರೀಶ್ ಮತ್ತು ಭಾವನಾ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ