ಚಿನಕುರುಳಿಯಂತೆ ಓಡಾಡುತ್ತಿದ್ದ ರಶ್ಮಿಕಾ ಮಂದಣ್ಣ ಸ್ಥಿತಿ ಏನಾಗಿದೆ ನೋಡಿ: ಶೂಟಿಂಗ್ ಗೂ ಗೈರು

Krishnaveni K

ಶನಿವಾರ, 11 ಜನವರಿ 2025 (10:05 IST)
ಮುಂಬೈ: ಬಾಲಿವುಡ್, ಟಾಲಿವುಡ್ ನಲ್ಲಿ ಏಕಕಾಲಕ್ಕೆ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ತಿನ್ನುವಂತಾಗಿದೆ.

ಸಲ್ಮಾನ್ ಖಾನ್ ಈಗ ಬಾಲಿವುಡ್ ನಲ್ಲಿ ಸಲ್ಮಾನ್ ನಾಯಕರಾಗಿರುವ ಸಿಖಂದರ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ವಿಕ್ಕಿ ಕೌಶಲ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

ಸಿಖಂದರ್ ಸಿನಿಮಾಗಾಗಿ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ರಶ್ಮಿಕಾ ಪೆಟ್ಟು ಮಾಡಿಕೊಂಡಿದ್ದಾರೆ. ಆದರೆ ಆತಂಕ ಪಡುವಂತದ್ದು ಏನೂ ಇಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಹಾಗಿದ್ದರೂ ಗಾಯವಾಗಿರುವ ಹಿನ್ನಲೆಯಲ್ಲಿ ಸಿಖಂದರ್ ಶೂಟಿಂಗ್ ಕೂಡಾ ಸ್ಥಗಿತಗೊಂಡಿದೆ. ಕೆಲವು ದಿನ ರಶ್ಮಿಕಾ ವಿಶ್ರಾಂತಿ ಪಡೆಯಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕವಷ್ಟೇ ಅವರು ಮತ್ತೆ ಶೂಟಿಂಗ್ ಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ