ಶಿವಣ್ಣ ಆರೋಗ್ಯದಲ್ಲಿ ಚೇತರಿಕೆ: ಜನವರಿ ಅಂತ್ಯಕ್ಕೆ ಅಮೆರಿಕಾದಿಂದ ಭಾರತಕ್ಕೆ ವಾಪಸ್

Sampriya

ಶನಿವಾರ, 28 ಡಿಸೆಂಬರ್ 2024 (15:23 IST)
Photo Courtesy X
ಮೈಸೂರು: ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಾವೇ ಫೋನ್‌ನಲ್ಲಿ ಮಾತಾಡಿದ್ದೇವೆ. ಆಪರೇಷನ್ ಬಳಿಕ ಉತ್ತಮ ರೀತಿ ಆರೋಗ್ಯ ಚೇತರಿಕೆ ಕಾಣುತ್ತಿದೆ ಎಂದು ಡಾ.ರಾಜ್ ಕುಮಾರ್ ಭಾಮೈದ ಗೋವಿಂದರಾಜ್ ಹೇಳಿದ್ದಾರೆ.

ಶಿವಣ್ಣ ಆಪರೇಷನ್ ಸಕ್ಸಸ್ ಆಗಿದೆ. ಜನವರಿ 26 ಕ್ಕೆ ಭಾರತಕ್ಕೆ ಹಿಂದಿರುಗಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕವಿಲ್ಲ ಎಂದು ಮೈಸೂರಲ್ಲಿ ಅವರು ಹೇಳಿದರು.

ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಶಿವಣ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 4 ವಾರ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ಸದ್ಯ ಡಾಕ್ಟರ್ ವಿಶ್ರಾಂತಿಗೆ ಸೂಚಿಸಿದ್ದು, ಶಿವಣ್ಣ ರೆಸ್ಟ್ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವರಾಜಕುಮಾರ್‌ ಅವರು ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ವೈದ್ಯ ಮುರುಗೇಶ್‌ ಮನೋಹರನ್‌ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ