ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ರಿಲೀಸ್ ಮುಂದಕ್ಕೆ

ಬುಧವಾರ, 1 ಸೆಪ್ಟಂಬರ್ 2021 (09:31 IST)
ಬೆಂಗಳೂರು: ಇದೇ ಗಣೇಶ ಹಬ್ಬಕ್ಕೆ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಬಿಡುಗಡೆಯಾಗುತ್ತದೆಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.


ಕೊರೋನಾ ಭೀತಿಯಿಂದಾಗಿ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿದೆ. ಈ ಮೊದಲು ಸೆ.10 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಈ ಸಿನಿಮಾ ಮೂಲಕ ಸ್ಟಾರ್ ಸಿನಿಮಾಗಳು ಮತ್ತೆ ಬಿಡುಗಡೆಯಾಗಿ ಚಿತ್ರರಂಗ ಚೇತರಿಕೆ ಕಾಣಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೊರೋನಾ ಕೇಸ್ ಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರದ ಟ್ರೈಲರ್, ಚಿತ್ರ ಬಿಡುಗಡೆ ದಿನಾಂಕ ಅನಿರ್ದಾಷ್ಟವಧಿಗೆ ಮುಂದೂಡಲಾಗುತ್ತದೆ ಎಂದು ಶಿವಣ್ಣ ಹೇಳಿಕೆ ಕೊಟ್ಟಿದ್ದಾರೆ. ಇನ್ನು, ರಿಲೀಸ್ ಮುಂದೂಡಿಕೆಯಾಗಿರುವುದಕ್ಕೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ