ನಂದಿನಿ ಉತ್ಪನ್ನಗಳ ರಾಯಭಾರಿಯಾದ ನಟ ಶಿವರಾಜ್ ಕುಮಾರ್
ಈ ಮೊದಲು ಡಾ.ರಾಜ್ ಕುಮಾರ್ ಅವರ ಬಳಿಕ ಪುನೀತ್ ರಾಜ್ ಕುಮಾರ್ ನಂದಿನಿ ಉತ್ಪನ್ನಗಳಿಗೆ ಯಾವುದೇ ಸಂಭಾವನೆ ಇಲ್ಲದೇ ರಾಯಭಾರಿಗಳಾಗಿದ್ದರು. ಇದೀಗ ಶಿವರಾಜ್ ಕುಮಾರ್ ರಾಯಭಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯೇ ಶಿವಣ್ಣನಿಗೆ ನಂದಿನಿ ಉತ್ಪನ್ನಗಳ ಪ್ರಚಾರಕರಾಗಲು ಕೇಳಿಕೊಳ್ಳಲಾಗಿತ್ತು. ಅದನ್ನು ಅವರು ಒಪ್ಪಿಕೊಂಡಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಶಿವಣ್ಣನ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಶಿವರಾಜ್ ಕುಮಾರ್ ಗೆ ಅಪಾರ ಅಭಿಮಾನಿ ಬಳಗವಿದೆ. ಈ ಕಾರಣಕ್ಕೆ ಅವರನ್ನು ರಾಯಭಾರಿಯಾಗಲು ಕೇಳಿಕೊಳ್ಳಲಾಗಿದೆ.