ಮೂರು ದಿನಕ್ಕೆ ಕೌಸಲ್ಯ ಸುಪ್ರಜಾ ರಾಮ ಗಳಿಸಿದ್ದೆಷ್ಟು?

ಸೋಮವಾರ, 31 ಜುಲೈ 2023 (15:58 IST)
Photo Courtesy: Twitter
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಜುಲೈ 28 ರಂದು ಬಿಡುಗಡೆಯಾದ ಸಿನಿಮಾ ಈಗ ಮೂರು ದಿನಕ್ಕೆ ಗಳಿಸಿದ್ದೆಷ್ಟು?

ಡಾರ್ಲಿಂಗ್ ಕೃಷ್ಣ ಸಿನಿಮಾಗಳೆಂದರೆ ನಿರ್ಮಾಪಕರಿಗೆ ಮೋಸ ಮಾಡಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೊದಲ ಮೂರು ದಿನದಲ್ಲಿ ಚಿತ್ರ 1.50 ಕೋಟಿ ರೂ. ಗಳಿಕೆ ಮಾಡಿದೆ.  ಮೊದಲ ದಿನ 31 ಲಕ್ಷ, ಎರಡನೇ ದಿನ 51 ಲಕ್ಷ ಮತ್ತು ನಿನ್ನೆ ಭಾನುವಾರದಂದು 68 ಲಕ್ಷ ರೂ. ಗಳಿಕೆಯಾಗಿದೆ. ವೀಕೆಂಡ್ ನಲ್ಲಿ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ನತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ