ಕ್ಯಾಪ್ಟನ್ ಮಿಲ್ಲರ್ ಟ್ರೈಲರ್ ನಲ್ಲಿ ಶಿವಣ್ಣನಿಗೆ ಮೋಸ?

Krishnaveni K

ಭಾನುವಾರ, 7 ಜನವರಿ 2024 (08:50 IST)
ಚೆನ್ನೈ: ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಟ್ರೈಲರ್ ನಿನ್ನೆ ಲಾಂಚ್ ಆಗಿದ್ದು, ಇದನ್ನು ನೋಡಿದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

ಈ ಸಿನಿಮಾದಲ್ಲಿ ಧನುಷ್ ಜೊತೆಗೆ ಕನ್ನಡ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಶಿವಣ್ಣ ನಟಿಸಿರುವ ಹಾಡೊಂದು ಬಿಡುಗಡೆಯಾಗಿತ್ತು. ಹೀಗಾಗಿ ಟ್ರೈಲರ್ ಮೇಲೆ ಶಿವಣ್ಣನ ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು.

ಆದರೆ ಟ್ರೈಲರ್ ನೋಡಿದ ಶಿವಣ್ಣ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇಡೀ ಟ್ರೈಲರ್ ನಲ್ಲಿ ಶಿವರಾಜ್ ಕುಮಾರ್ ಒಂದು ಗಳಿಗೆ ಹಾಗೆ ಬಂದು ಹೀಗೆ ಹೋಗುತ್ತಾರೆ. ಅವರನ್ನು ಹೆಚ್ಚು ತೋರಿಸಿಯೇ ಇಲ್ಲ.

ಹೀಗಾಗಿ ಶಿವರಾಜ್‍ ಕುಮಾರ್ ಗೆ ಮೋಸ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಶಿವಣ್ಣ ಹೆಸರು ಬಳಸಲಾಯಿತೇ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ