ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಪ್ರಮೋಷನ್ ಗಾಗಿ ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡಿದ ಶಿವಣ್ಣ

Krishnaveni K

ಶನಿವಾರ, 6 ಜನವರಿ 2024 (10:20 IST)
Photo Courtesy: Twitter
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ತಮಿಳಿನಲ್ಲಿ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಿಡುಗಡೆ ಖುಷಿಯಲ್ಲಿದ್ದಾರೆ.

ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಾಯಕನ ಸಹೋದರನ ಪಾತ್ರ ಮಾಡಿದ್ದಾರೆ. ಶಿವಣ್ಣ ಮತ್ತು ಧನುಷ್ ಜೊತೆಯಾಗಿ ಹೆಜ್ಜೆ ಹಾಕಿದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದಿತ್ತು.

ಜನವರಿ 12 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಶಿವಣ್ಣ ಕೆಲವು ತಮಿಳು ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದಾರೆ.

ಸಂದರ್ಶನದ ವೇಳೆ ಪಕ್ಕಾ ತಮಿಳಿಗರಂತೇ ತಮಿಳಿನಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಶಿವಣ್ಣ ತಮ್ಮ ಯೌವನದ ದಿನಗಳಲ್ಲಿ ಅಂದಿನ ಮದ್ರಾಸ್ ನಲ್ಲಿ ಕಳೆದವರು. ಹೀಗಾಗಿ ಅವರಿಗೆ ಈಗಲೂ ತಮಿಳು ಭಾಷೆ ನಿರರ್ಗಳವಾಗಿ ಮಾತನಾಡಲು ಬರುತ್ತದೆ. ಹೀಗಾಗಿ ಕ್ಯಾಪ್ಟನ್ ಮಿಲ್ಲರ್ ಪ್ರಮೋಷನಲ್ ಸಂದರ್ಶನಗಳಲ್ಲಿ ತಮಿಳಿನಲ್ಲಿಯೇ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ