60 ರ ಸಂಭ್ರಮದಲ್ಲಿ ಶಿವಣ್ಣನಿಗೆ ಅಪ್ಪು ಇಲ್ಲದ ನೋವು
ಇದುವರೆಗೆ ಪ್ರತೀ ಹುಟ್ಟುಹಬ್ಬಕ್ಕೂ ಜೊತೆಯಾಗಿರುತ್ತಿದ್ದ ಪ್ರೀತಿಯ ತಮ್ಮ ಪುನೀತ್ ಇಲ್ಲದೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರಿಗೆ ನೋವು ತಂದಿದೆ.
ಅಪ್ಪು ಇದ್ದಿದ್ದರೆ ಈ ಜನ್ಮದಿನ ಇನ್ನಷ್ಟು ಖುಷಿಯಾಗಿರುತ್ತಿತ್ತು. ಅವನಿಲ್ಲದ ನೋವು ಕಾಡುತ್ತಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ. ಹೀಗಾಗಿ ಒಂದೆಡೆ ಜನ್ಮದಿನದ ಖುಷಿಯಾದರೆ ಮತ್ತೊಂದೆಡೆ ಪ್ರೀತಿಯ ಅಪ್ಪು ಇಲ್ಲದ ನೋವು ಅವರನ್ನು ಕಾಡುತ್ತಿದೆ.