ಹೊಯ್ಸಳ ಶೂಟಿಂಗ್ ಸೆಟ್ ನಲ್ಲಿ ಮೋಹಕ ತಾರೆ ರಮ್ಯಾ

ಸೋಮವಾರ, 11 ಜುಲೈ 2022 (10:10 IST)
ಬೆಂಗಳೂರು: ಡಾಲಿ ಧನಂಜಯ್ ನಾಯಕರಾಗಿರುವ ಹೊಯ್ಸಳ ಸಿನಿಮಾ ಶೂಟಿಂಗ್ ಗೆ ಮೋಹಕ ತಾರೆ ರಮ್ಯಾ ಎಂಟ್ರಿ ನೀಡಿದ್ದಾರೆ.

ರಮ್ಯಾ-ಡಾಲಿ ಧನಂಜಯ್ ಜೊತೆಗಿರುವ ಫೋಟೋವೊಂದು ಮೊನ್ನೆ ವೈರಲ್ ಆಗಿತ್ತು. ಇದರ ಹಿಂದಿರುವ ಕಾರಣವನ್ನು ರಮ್ಯಾ ಈಗ ಖುದ್ದಾಗಿ ಬಹಿರಂಗಪಡಿಸಿದ್ದಾರೆ.

ಚಿತ್ರತಂಡದ ಆಹ್ವಾನದ ಮೇರೆಗೆ ರಮ್ಯಾ ಶೂಟಿಂಗ್ ಸ್ಪಾಟ್ ಗೆ ಭೇಟಿ ಕೊಟ್ಟಿದ್ದಾರೆ. ಚಿತ್ರದ ಆಕ್ಷನ್ ದೃಶ್ಯಗಳನ್ನು ನೋಡಿ ಅದ್ಭುತ ಎಂದು ಹೊಗಳಿದ್ದಾರೆ. ಧನಂಜಯ್ ಮತ್ತು ನಾಯಕಿ ಅಮೃತಾ ಅಯ್ಯಂಗಾರ್ ಅಭಿನಯದ ಬಗ್ಗೆ ಭರಪೂರ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ