ಪಾರ್ವತಮ್ಮ ರಾಜ್ ಕುಮಾರ್ ಗೆ ಸರ್ಕಾರಿ ಗೌರವ ಕೊಟ್ಟಿದ್ದಕ್ಕೆ ಪುತ್ರ ಶಿವರಾಜ್ ಹೇಳಿದ್ದೇನು?

ಶನಿವಾರ, 10 ಜೂನ್ 2017 (09:30 IST)
ಬೆಂಗಳೂರು: ನಿರ್ಮಾಪಕಿ, ವರನಟ ಡಾ. ರಾಜ್ ಪತ್ನಿ ಪಾರ್ವತಮ್ಮನವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜ ಹೊದಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಪುತ್ರ ಶಿವರಾಜ್ ಕುಮಾರ್ ಅಮ್ಮನಿಗೆ ಸರ್ಕಾರಿ ಗೌರವ ಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

 
ಸಿನಿಮಾ ನಿರ್ಮಾಪಕಿಯೊಬ್ಬರಿಗೆ ರಾಷ್ಟ್ರಧ್ವಜ ಹೊದಿಸಿದ್ದಲ್ಲದೆ, ಸರ್ಕಾರಿ ಗೌರವಗಳೊಂದಿಗೆ, ಸರ್ಕಾರಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಆದರೆ ಶಿವಣ್ಣ ಪ್ರಕಾರ ಇದು ಸರಿಯಾದ ನಿರ್ಧಾರವಾಗಿತ್ತು. ‘ನನ್ನ ಕೇಳಿದರೆ ಇದು ಸರಿ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದವರು. ಮಹಿಳೆಯಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅದನ್ನು ನೋಡಿಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ’ ಎಂದು ಶಿವಣ್ಣ ಸಮರ್ಥಿಸಿಕೊಂಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ