ಪ್ರಭಾಸ್ ‘ರಾಧೇ ಶ್ಯಾಮ್’ ಸಿನಿಮಾಗೆ ಶಿವರಾಜ್ ಕುಮಾರ್ ಸಾಥ್
ರಾಧೇ ಶ್ಯಾಮ್ ತೆಲುಗು, ಕನ್ನಡ, ಮಲಯಾಳ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಆಯಾ ಭಾಷೆಯ ಅವತರಣಿಕೆಗೆ ಆಯಾ ಭಾಷೆಯ ಸ್ಟಾರ್ ನಟರಿಂದ ಹಿನ್ನಲೆ ಧ್ವನಿ ನೀಡಲಾಗುತ್ತದೆ.
ಇದೇ ರೀತಿ ಕನ್ನಡ ಭಾಷೆಗೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಈ ಮೂಲಕ ತೆಲುಗು ಸಿನಿಮಾಗೆ ಶಿವಣ್ಣ ಸಾಥ್ ನೀಡುತ್ತಿದ್ದಾರೆ.