ಜೈಲರ್ ಟಿಶ್ಯೂ ಬಾಕ್ಸ್ ದೃಶ್ಯೂವನ್ನು ರಿಕ್ರಿಯೇಟ್ ಮಾಡಿದ ಶಿವರಾಜ್ ಕುಮಾರ್

ಭಾನುವಾರ, 20 ಆಗಸ್ಟ್ 2023 (09:26 IST)
Photo Courtesy: Twitter
ಬೆಂಗಳೂರು: ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದಾರೆ.

 ಈ ಸಿನಿಮಾದ ದೃಶ್ಯವೊಂದರಲ್ಲಿ ಶಿವಣ್ಣ ಧಂ ಎಳೆಯುತ್ತಾ ಟಿಶ್ಯೂ ಬಾಕ್ಸ್ ತಳ್ಳುವ ದೃಶ್ಯವೊಂದು ಎಲ್ಲರೂ ಶಿಳ್ಳೆ ಹಾಕುವಂತೆ ಮಾಡಿತ್ತು. ಆ ದೃಶ್ಯ ನೋಡಿ ಪರಭಾಷಿಕರೂ ಶಿವಣ್ಣನ ಅಭಿಮಾನಿಗಳಾಗಿದ್ದಾರೆ.

ಇದೀಗ ಜೀ ಕನ್ನಡ ವಾಹಿನಿಯ ಡಿಕೆಡಿ ಶೋನಲ್ಲಿ ಶಿವಣ್ಣ ಮತ್ತೆ ಅದೇ ದೃಶ್ಯವನ್ನು ಪುನರಾವರ್ತಿಸಿದ್ದಾರೆ. ಎಲ್ಲರ ಅಪೇಕ್ಷೆ ಮೇರೆಗೆ ಶಿವಣ್ಣ ಮತ್ತೆ ಟಿಶ್ಯೂ ಬಾಕ್ಸ್ ತಳ್ಳುವ ದೃಶ‍್ಯ ರಿ ಕ್ರಿಯೇಟ್ ಮಾಡಿದ್ದು ಅಲ್ಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ